✨ New Arrivals Just Dropped!Explore
HomeStore

ಪದರುಗಳು

Product image 1
Product image 2

ಪದರುಗಳು

ಪದರುಗಳು

ಶ್ರೀ ವಿವೇಕಾನಂದ ಕಾಮತರ ಪದರುಗಳು ಕಾದಂಬರಿ ಕನ್ನಡ ಸಾಹಿತ್ಯಕ್ಕೆ ಒಂದು ವಿಶೇಷ ಸೇರ್ಪಡೆ. ಒಂದು ಹೆಣ್ಣಿನ ಅಂತರಂಗವನ್ನು ಮನೋ-ವೈಜ್ಞಾನಿಕ ನೆಲೆಯಲ್ಲಿ ನೋಡುವ ಮತ್ತು ಆ ಮೂಲಕ ಕಥನ ಮತ್ತು ವಿಜ್ಞಾನವನ್ನು ಬೆಸೆಯುವ ಬರಹವಿದು. ಇಲ್ಲಿ ಅಂತಃಕರಣವಿದೆ, ಪ್ರೀತಿಯಿದೆ, ವಾತ್ಸಲ್ಯವಿದೆ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ನೊಂದ ಹೆಣ್ಣಿಗೆ ಸಮಾಧಾನ ಕೊಡಬೇಕೆನ್ನುವ ಸಾಮಾಜಿಕ ಜವಾಬ್ದಾರಿಯಿದೆ. ನಾವು ಚಂದ್ರನ ಮೇಲೆ ಕಾಲಿಟ್ಟು ಗ್ರಹ ತಾರೆಗಳೆಡೆಗೆ ಕೈಚಾಚಿದರೂ, ಪ್ರಖರ ಕೃತಕ ಬುದ್ಧಿಮತ್ತೆಯನ್ನು ಸೃಷ್ಟಿಸಲು ಹೊರಟರೂ, ಮನುಷ್ಯನ ಮನಸ್ಸು ನಮಗಿನ್ನೂ ನಿಗೂಢ. ಮನುಷ್ಯ ವರ್ತನೆಗಳು ನಮ್ಮ ಊಹೆಗೆ ನಿಲುಕದವು. ಅಂತಹ ಒಂದು ಗಾಢಗುಟ್ಟಿನ ಹಿಂದೆ ಹೊರಟ ಈ ಕಾದಂಬರಿಯು ಮನೋಲೋಕದ ಅನೇಕ ಪದರುಗಳನ್ನು ದರ್ಶಿಸುತ್ತದೆ. ನುರಿತ ಮತ್ತು ಸೂಕ್ಷ್ಮ ಕತೆಗಾರರಾದ ವಿವೇಕಾನಂದ ಕಾಮತರು, ವಿಭಿನ್ನ ಪಾತ್ರಗಳು ನಮ್ಮ ಓದಿಗೆ ಸುಲಲಿತವಾಗಿ ಇಳಿಯುವಂತೆ ಈ ಕಾದಂಬರಿಯನ್ನು ಸೃಷ್ಟಿಸಿದ್ದಾರೆ.

-ಎಂ ಆರ್ ದತ್ತಾತ್ರಿ
$0.49

Original: $1.62

-70%
ಪದರುಗಳು

$1.62

$0.49

Product Information

Shipping & Returns

Description

ಶ್ರೀ ವಿವೇಕಾನಂದ ಕಾಮತರ ಪದರುಗಳು ಕಾದಂಬರಿ ಕನ್ನಡ ಸಾಹಿತ್ಯಕ್ಕೆ ಒಂದು ವಿಶೇಷ ಸೇರ್ಪಡೆ. ಒಂದು ಹೆಣ್ಣಿನ ಅಂತರಂಗವನ್ನು ಮನೋ-ವೈಜ್ಞಾನಿಕ ನೆಲೆಯಲ್ಲಿ ನೋಡುವ ಮತ್ತು ಆ ಮೂಲಕ ಕಥನ ಮತ್ತು ವಿಜ್ಞಾನವನ್ನು ಬೆಸೆಯುವ ಬರಹವಿದು. ಇಲ್ಲಿ ಅಂತಃಕರಣವಿದೆ, ಪ್ರೀತಿಯಿದೆ, ವಾತ್ಸಲ್ಯವಿದೆ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ನೊಂದ ಹೆಣ್ಣಿಗೆ ಸಮಾಧಾನ ಕೊಡಬೇಕೆನ್ನುವ ಸಾಮಾಜಿಕ ಜವಾಬ್ದಾರಿಯಿದೆ. ನಾವು ಚಂದ್ರನ ಮೇಲೆ ಕಾಲಿಟ್ಟು ಗ್ರಹ ತಾರೆಗಳೆಡೆಗೆ ಕೈಚಾಚಿದರೂ, ಪ್ರಖರ ಕೃತಕ ಬುದ್ಧಿಮತ್ತೆಯನ್ನು ಸೃಷ್ಟಿಸಲು ಹೊರಟರೂ, ಮನುಷ್ಯನ ಮನಸ್ಸು ನಮಗಿನ್ನೂ ನಿಗೂಢ. ಮನುಷ್ಯ ವರ್ತನೆಗಳು ನಮ್ಮ ಊಹೆಗೆ ನಿಲುಕದವು. ಅಂತಹ ಒಂದು ಗಾಢಗುಟ್ಟಿನ ಹಿಂದೆ ಹೊರಟ ಈ ಕಾದಂಬರಿಯು ಮನೋಲೋಕದ ಅನೇಕ ಪದರುಗಳನ್ನು ದರ್ಶಿಸುತ್ತದೆ. ನುರಿತ ಮತ್ತು ಸೂಕ್ಷ್ಮ ಕತೆಗಾರರಾದ ವಿವೇಕಾನಂದ ಕಾಮತರು, ವಿಭಿನ್ನ ಪಾತ್ರಗಳು ನಮ್ಮ ಓದಿಗೆ ಸುಲಲಿತವಾಗಿ ಇಳಿಯುವಂತೆ ಈ ಕಾದಂಬರಿಯನ್ನು ಸೃಷ್ಟಿಸಿದ್ದಾರೆ.

-ಎಂ ಆರ್ ದತ್ತಾತ್ರಿ
ಪದರುಗಳು | Harivu Books