✨ New Arrivals Just Dropped!Explore
HomeStore

ಮೂಲ ಸಂಕ್ಷೇಪ ಶ್ರೀರಾಮಾಯಣಂ

Product image 1
Product image 2

ಮೂಲ ಸಂಕ್ಷೇಪ ಶ್ರೀರಾಮಾಯಣಂ

ಮೂಲ ಸಂಕ್ಷೇಪ ಶ್ರೀರಾಮಾಯಣಂ

ಮಹರ್ಷಿ ವಾಲ್ಮೀಕಿಗಳಿಂದ ರಚಿತವಾದ ಶ್ರೀಮದ್ರಾಮಾಯಣವು ಆದಿಕಾವ್ಯವೆನಿಸಿ, ಜಗತ್ತಿನಲ್ಲಿ ಪ್ರಚಲಿತವಿರುವ ಎಲ್ಲ ಇತರ ರಾಮಾಯಣಗಳಿಗಿಂತ ಪ್ರಾಚೀನವೂ, ಅವಕ್ಕೆಲ್ಲ ಒಂದಿಲ್ಲೊಂದು ಬಗೆಯಲ್ಲಿ ಮೂಲವೂ ಆಗಿದೆ. "ಪರಂ ಕವೀನಾಂ ಆಧಾರಂ" (ಇತರ ಕವಿಗಳ ಕೃತಿಗಳಿಗೆ ಅದು ಆಧಾರವಾಗಲಿ) ಎಂಬ ಬ್ರಹ್ಮದೇವರ ಆಶೀರ್ವಾದವು (ರಾಮಾಯಣೋಕ್ತವಾಗಿದ್ದು) ಸಾರ್ಥಕವಾಗಿರುವುದು ಇಂದಿಗೂ ಎಲ್ಲರಿಗೂ ತಿಳಿದಿದೆ.

ಈ ವಾಲ್ಮೀಕಿ ರಾಮಾಯಣಕ್ಕೂ ಮೂಲವಾದುದೆಂದರೆ, ನಾರದ ಮಹರ್ಷಿಗಳು ತಾವಾಗಿಯೇ ಅವರಾಶ್ರಮಕ್ಕೆ ಬಂದು ಉಪದೇಶಿಸಿದ ಸಂಕ್ಷೇಪ ರಾಮಾಯಣ. ಇದಕ್ಕಿಂತ ಹಳೆಯ ಮೂಲವಿರುವುದು, ಶತಕೋಟಿ ಗ್ರಂಥ ವಿಸ್ತಾರವೆನಿಸಿದ, ದೇವಲೋಕದಲ್ಲಿ ಪ್ರಚುರವಿದೆಯೆಂದು ನಂಬಲಾದ ಶ್ರೀರಾಮಾಯಣ. ಅದು ನಮಗೆ ಹಾಗೆಯೇ ಲಭ್ಯವಿಲ್ಲ.

ಈ ಕೊರತೆಯನ್ನು ತೀರಿಸಿ ಭೂಲೋಕಕ್ಕೆ ಅದನ್ನಿಳಿಸಿದವರು ನಾರದರು; ಅದನ್ನು ಉಳಿಸಿಕೊಟ್ಟವರು ವಾಲ್ಮೀಕಿಗಳು. ವಾಲ್ಮೀಕಿ ರಾಮಾಯಣದ ಆದಿಸರ್ಗವೇ ಈ ಸಂಕ್ಷೇಪ ರಾಮಾಯಣ. ಇದಕ್ಕೆ ಗೋವಿಂದರಾಜೀಯ, ಮಹೇಶ್ವರತೀರ್ಥೀಯ, ತನಿಶ್ಲೋಕೀ ಮುಂತಾದ ಅನೇಕ ಪ್ರಾಚೀನ ವ್ಯಾಖ್ಯಾನಗಳ ಸಂಗ್ರಹ ಮತ್ತು ರಸಾಂಶಗಳಿಂದ ಪುಷ್ಟವಾದ (ಕನ್ನಡ) "ಶ್ರೀರಾಮಪಾದಪ್ರಣಯಿನೀ" ಎಂಬ ಈ ವ್ಯಾಖ್ಯಾನವು ಹೀಗೆ ಹೊರಬರುತ್ತಿರುವುದು ಇದೇ ಮೊದಲಿಗೆ. ರಸಪುಷ್ಟವಾದ ಮೂಲದ ಸೊಬಗನ್ನೂ, ಮರ್ಮಗಳನ್ನೂ ಹೊರತಂದಿರುವ ಈ ಕೃತಿಯು ಕನ್ನಡಿಗರಿಗೆ ಭೋಗ್ಯವಾಗಲಿ.

$0.65

Original: $2.16

-70%
ಮೂಲ ಸಂಕ್ಷೇಪ ಶ್ರೀರಾಮಾಯಣಂ

$2.16

$0.65

Product Information

Shipping & Returns

Description

You may also like

NEW
Thumbnail 1

ಪಂಪ ಭಾರತ ಓದು

$1.51

NEW
Thumbnail 1

ಮುದ್ದೆ ಗಂಟು

$2.16

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

-70%NEW
Thumbnail 1

ವಿಶ್ವವಿಖ್ಯಾತ ರಸಾಯನ ವಿಜ್ಞಾನಿಗಳು

$2.16

$0.65

-69%NEW
Thumbnail 1

ರೇಖಾಗಣಿತ

$0.65

$0.20

ಮೂಲ ಸಂಕ್ಷೇಪ ಶ್ರೀರಾಮಾಯಣಂ | Harivu Books